ಭಾರತದಲ್ಲಿ ಪರಮಾಣು ಶಕ್ತಿ

	ವಿಕಿರಣಪಟು ಧಾತುವನ್ನು ಉಪಯೋಗಿಸಿ ಪರಮಾಣುಶಕ್ತಿಯನ್ನು ಬಸಿಯುವ ತಂತ್ರ ಭಾರತದಲ್ಲಿ ಮೈದಳೆದು ವಿಕಸಿಸಿರುವ ಪರಿಯನ್ನು ಪ್ರಸಕ್ತ ಲೇಖನದಲ್ಲಿ ವಿವರಿಸಿದೆ.  ಪ್ರಪಂಚದ ಆಧುನಿಕ ವಿಜ್ಞಾನ ಮತ್ತು ತಂತ್ರವಿದ್ಯೆಯ ಪಟದಲ್ಲಿ ಭಾರತವನ್ನು ನೆಲೆಗೊಳಿಸುವ ಸಲುವಾಗಿ ರಾಷ್ಟ್ರೀಯ ಸರ್ಕಾರ ಪರಮಾಣುಶಕ್ತಿ ಇಲಾಖೆಯನ್ನೂ (ಡಿಪಾರ್ಟ್‍ಮೆಂಟ್ ಆಫ್ ಅಟಾಮಿಕ್ ಎನರ್ಜಿ) ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನ ಸಂಸ್ಥೆಯನ್ನೂ (ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್) ಸ್ಥಾಪಿಸಿತು. ಆಧುನಿಕ ಪ್ರಗತಿಶೀಲ ಭಾರತದ ಬಗ್ಗೆ ನೆಹರೂ ಕಂಡ ಭವ್ಯ ಮುನ್ನೋಟದ ಅಂಗವಾಗಿ ಈ ಸಂಸ್ಥೆಗಳನ್ನು ರೂಪಿಸಲು ಕಾರಣರಾದವರು ಹೋಮಿ ಜೆಹಾಂಗೀರ್ ಭಾಭಾ ಮತ್ತು ಶಾಂತಿಸ್ವರೂಪ್ ಭಾಟ್ನನಗರ್.

	1948ರಲ್ಲಿ ಸ್ಥಾಪಿಸಲಾದ ಪರಮಾಣು ಆಯೋಗದ ಸನ್ನದಿನಲ್ಲಿ ವಿಧಿಸಿರುವ ಗುರಿಗಳಿವು:

	1 ಪರಮಾಣುಶಕ್ತಿ ಕಾಯಿದೆಯ ಉಪಬಂಧಗಳು ಭಾರತ ಸರ್ಕಾರಕ್ಕೆ ನೀಡಿರುವ ಅಧಿಕಾರ ಚಲಾಯಿಸಿ ಪರಮಾಣುಶಕ್ತಿ ಕುರಿತಂತೆ ಈ ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಕಾಲದಿಂದ ಕಾಲಕ್ಕೆ ಅವಶ್ಯವೆನಿಸುವ ಕ್ರಮಗಳನ್ನು ಕೈಗೊಳ್ಳುವುದು.

	2 ಪರಮಾಣುಶಕ್ತಿ ಕುರಿತಂತೆ ಉಪಯುಕ್ತ ಖನಿಜಗಳ ನೆಲೆ ಗುರುತಿಸಲು ಭಾರತ ಗಣರಾಜ್ಯದೊಳಗಿನ ಪ್ರದೇಶಗಳ ಮೋಜಣಿ ಮಾಡುವುದು.

	3 ಪರಮಾಣು ಶಕ್ತಿಗೆ ಸಂಬಂಧಿಸಿದ ಸಂಶೋಧನೆಗಳನ್ನು ಪ್ರಯೋಗಾಲಯಗಳಲ್ಲಿ ಪ್ರವರ್ತಿಸುವುದು. ವಿಶ್ವವಿದ್ಯಾಲಯಗಳಲ್ಲಿ ಇಂಥ ಸಂಶೋಧನೆಗಳಿಗೆ ಸಹಾಯಧನ ಒದಗಿಸುವುದು ಮತ್ತು ನ್ಯೂಕ್ಲಿಯರ್ ಭೌತವಿಜ್ಞಾನ ಕುರಿತಂತೆ ಬೋಧನೆಗೆ ಮತ್ತು ಸಂಶೋಧನೆಗೆ ಅಧಿಕ ಸೌಕರ್ಯ ಒದಗಿಸುವುದು.

	ಈ ಸನ್ನದಿನ ಗುರಿಗಳನ್ನು ಸಾಧಿಸುವ ಸಲುವಾಗಿ ಪರಮಾಣುಶಕ್ತಿ ಇಲಾಖೆ ತನ್ನ ಉದ್ದೇಶಗಳನ್ನು ರೂಪಿಸಿದೆ:

	1 ಮೂಲವಿಜ್ಞಾನಗಳಲ್ಲಿ ಸಂಶೋಧನೆ, ಸ್ವದೇಶೀಯ ಸಂಪನ್ಮೂಲಗಳನ್ನು ಆಧರಿಸಿ ನ್ಯೂಕ್ಲಿಯರ್ ತಂತ್ರವಿದ್ಯೆಯ ಅಭಿವರ್ಧನೆ. ಕೃಷಿ ವೈದ್ಯ ಕೈಗಾರಿಕೆ ಮುಂತಾದವುಗಳಿಗೆ ನ್ಯೂಕ್ಲಿಯರ್ ವಿಜ್ಞಾನದ ಅನ್ವಯ.

	2 ನ್ಯೂಕ್ಲಿಯರ್ ಇಂಧನ, ನಿಯಂತ್ರಣ ಸಲಕರಣೆ, ಸಂಶೋಧನೆ ಮತ್ತು ಸಾಮಥ್ರ್ಯ ರಿಯಾಕ್ಟರುಗಳು, ನ್ಯೂಕ್ಲಿಯರ್ ಸಾಮಥ್ರ್ಯ ಸ್ಥಾವರಗಳು ಮತ್ತು ಸಂಬಂಧಿತ ಯಂತ್ರಾವಳಿ, ಸಂಶೋಧನ ಸಲಕರಣೆ ಮತ್ತು ಪರಮಾಣುಶಕ್ತಿ ಕಾರ್ಯಕ್ರಮಕ್ಕೆ ಬೇಕಾಗುವ ಅತಿಶುದ್ಧ ವಸ್ತುಗಳು-ಇವುಗಳ ಉತ್ಪಾದನೆ.

	3 ಪರಮಾಣುವಿಜ್ಞಾನ ಮತ್ತು ತಂತ್ರವಿದ್ಯೆಯ ವಿವಿಧ ಕ್ಷೇತ್ರಗಳಲ್ಲಿ ಕುಶಲಿಗಳ ಶಿಕ್ಷಣ ಮತ್ತು ಅಭಿವರ್ಧನೆ.

	4 ಪರಮಾಣುಶಕ್ತಿ ಅಭಿವರ್ಧಿಸಿದ ತಂತ್ರವಿದ್ಯೆಯನ್ನು, ಮುಖ್ಯವಾಗಿ ನ್ಯೂಕ್ಲಿಯೇತರ ತಂತ್ರವಿದ್ಯೆಯನ್ನು ಕೈಗಾರಿಕಾರಂಗಕ್ಕೆ ವರ್ಗಾಯಿಸುವುದು.

	5 ನ್ಯೂಕ್ಲಿಯರ್ ವಿಜ್ಞಾನದ ಲಾಭವನ್ನು ಕೃಷಿ, ವೈದ್ಯ. ಕೈಗಾರಿಕೆ ಮತ್ತು ಸಂಬಂಧಿತ ಸಂಶೋಧನ ಕ್ಷೇತ್ರಗಳಿಗೆ ವರ್ಗಾಯಿಸಲು ಮಾರ್ಗಸೂಚಿಸ್ಥಾವರ ಪ್ರಾಯೋಗಿಕ ಯೋಜನೆ ಮುಂತಾದವನ್ನು ಸ್ಥಾಪಿಸುವುದು.

	6 ವಿಶ್ವವಿದ್ಯಾಲಯಗಳಿಗೆ ಮತ್ತು ವಿವಿಧ ಪ್ರಯೋಗಾಲಯಗಳಿಗೆ ಯುಕ್ತ ಆರ್ಥಿಕ ಸಹಾಯ ಒದಗಿಸುವುದರ ಮೂಲಕ ಅವುಗಳಲ್ಲಿ ನ್ಯೂಕ್ಲಿಯರ್ ವಿಜ್ಞಾನ ಸಂಶೋಧನೆಯನ್ನು ಪ್ರವರ್ತಿಸುವುದು.

	ಪರಮಾಣುಶಕ್ತಿ ಇಲಾಖೆಯ ಚಟುವಟಿಕೆಗಳನ್ನು ಆರು ಮುಖ್ಯ ವಿಭಾಗಗಳಾಗಿ ವರ್ಗೀಕರಿಸಬಹುದು: (ಚಿ) ಸಂಶೋಧನೆ ಮತ್ತು ಅಭಿವರ್ಧನೆ, (b) ವಾಣಿಜ್ಯಾತ್ಮಕ ಸಾಮಥ್ರ್ಯ ಉತ್ಪಾದನೆ, (ಛಿ) ಸಾರ್ವಜನಿಕ ಕ್ಷೇತ್ರದ ಇತರ ಉದ್ಯಮಗಳು, (ಜ) ನ್ಯೂಕ್ಲಿಯರ್ ಆಸ್ಪೋಟನೆ, (e) ಇತರ ಕೆಲವು ಚಟುವಟಕೆಗಳು, (ಜಿ) ನ್ಯೂಕ್ಲಿಯರ್ ಸಂಲಯನ.
ಭಾಭಾ ಅಟಾಮಿಕ್ ಅಂಡ್ ರಿಸರ್ಚ್ ಸೆಂಟರಿನಲ್ಲಿಯ ಅIಖUS ಮತ್ತು ಆಊಖUಗಿಂ ರಿಯಾಕ್ಟರುಗಳ ವಿಹಂಗಮ ನೋಟ

	(ಚಿ) ಸಂಶೋಧೆನೆ ಮತ್ತು ಅಭಿವರ್ಧನೆ: 1 ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್ (ಃಂಖಅ). ಪರಮಾಣುಶಕ್ತಿ ಇಲಾಖೆಯ ಪ್ರಧಾನ ಸಂಶೋಧನಾಗಾರವಿದು.  ಮುಂಬಯಿ ಹತ್ತಿರದ ಟ್ರೋಂಬೆಯಲ್ಲಿದೆ. 1957ರಲ್ಲಿ ಇದನ್ನು ಸ್ಥಾಪಿಸಿದಾಗ ಇದರ ಹೆಸರು ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್‍ಮೆಂಟ್, ಟ್ರೋಂಬೇ ಎಂದಿತ್ತು. 1967ರಲ್ಲಿ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್ ಎಂದು ಪುನರ್ನಾಮಕರಿಸಲಾಯಿತು.  ಇಲ್ಲಿ ಲಭ್ಯವಿರುವ ಕೆಲವು ಸಂಶೋಧನ ಸೌಕರ್ಯಗಳಿವೆ:

40mW ಸಿರಸ್ ಸಂಶೋಧನ ರಿಯಾಕ್ಟರ್

1mW ಅಪ್ಸರ ಸಂಶೋಧನ ರಿಯಾಕ್ಟರ್
ಝೆರ್ಲಿನ (ಶಾಖಶಕ್ತಿ ಸಂಶೋಧನ ರಿಯಾಕ್ಟರ್)

5.5MeV ವಾನ್ ಡೆ ಗ್ರಾಫ್ ವೇಗೋತ್ಕರ್ಷಕ

ಯುರೇನಿಯಮ್ ಲೋಹ ಸ್ಥಾವರ

ಪ್ಲೂಟೋನಿಯಮ್ ಸ್ಥಾವರ

ಇಂಧನ ಘಟಕ ರೂವಣ ಸ್ಥಾವರ

ಪ್ರವರ್ಧಿತ ಗಣಕಗಳು

ಪೂರ್ಣಿಮಾ-ಭಾರತದ ಪ್ರಥಮ ಫಾಸ್ಟ್-ಬ್ರೀಡರ್ ರಿಯಾಕ್ಟರ್
ಃಂಖಅಯಲ್ಲಿ ಕೈಗೊಳ್ಳಲಾಗಿರುವ ಕೆಲವು ಮುಖ್ಯ ಯೋಜನೆಗಳಿವು:

ವಿಕಿರಣವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ
100mW ಶಾಖ ಶಕ್ತಿಸಂಶೋಧನ ರಿಯಾಕ್ಟರ್
ಪ್ಲೊಟೋನಿಯಮ್ ಸ್ಥಾವರದ ವಿಸ್ತರಣೆ
ವಿಕಿರಣ ಔಷಧಿಯ ಉತ್ಪಾದನಾ ಸೌಕರ್ಯ
ಯುರೋನಿಯಮ್ ಲೋಹ ಸ್ಥಾವರದ ವಿಸ್ತರಣೆ
ಪ್ಲೂಟೋನಿಯಮ್ ಪುನಶ್ಚಕ್ರೀಕರಣ ಯೋಜನೆ

2 ಚರಶಕ್ತಿ ಸೈಕ್ಲೊಟ್ರೋನ್ (ವೇರಿಯೆಬಲ್ ಎನರ್ಜಿ ಸೈಕ್ಲೊಟ್ರೋನ್) ಕಲ್ಕತ, ಬಿಧನ್ ನಗರದಲ್ಲಿದೆ. ನ್ಯೂಕ್ಲಿಯರ್ ಭೌತವಿಜ್ಞಾನ ಸಂಶೋಧನೆಗೂ ವ್ಯಾವಸಾಯಿಕ, ಜೀವವೈಜ್ಞಾನಿಕ. ಮುಂತಾದ ನಿಯಂತ್ರಕ ವಿಕಿರಣನ (ಇರ್ರೇಡಿಯೇಷನ್) ಕ್ರಿಯೆಗೂ ಮೀಸಲಾದ ಕೇಂದ್ರವಿದು. ಅಲ್ಫ ಕಣಗಳಂಥ ಆವಿಷ್ಟ ಕಣಗಳನ್ನು ಇಲ್ಲಿ 30meಗಿವರೆಗೂ ವೇಗೋತ್ಕರ್ಷಿಸಬಹುದು.

3 ಗೌರಿಬಿದನೂರು ಭೂಕಂಪನ ಠಾಣೆ: ಬೆಂಗಳೂರಿನಿಂದ ಸುಮಾರು 80ಕಿಮೀ ದೂರದಲ್ಲಿದೆ. ಯುನೈಟಡ್ ಕಿಂಗ್‍ಡಮ್ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್‍ಮೆಂಟಿನ ನೆರವಿನಿಂದ ಇದನ್ನು 1965ರಲ್ಲಿ ಸ್ಥಾಪಿಸಲಾಯಿತು. ಇದರ ಹರವು ಸುಮಾರು 625 ಚಕಿಮೀ. ಇಲ್ಲಿ 20 ಹ್ರಸ್ವಾವಧಿ ಕಂಪನಲೇಖಗಳೂ ಮೂರು ದೀರ್ಘಾವಧಿ ಕಂಪನಲೇಖಗಳೂ ಇವೆ. ನ್ಯೂಕ್ಲಿಯರ್ ಆಸ್ಟೋಟನೆಗಳನ್ನು, ಪತ್ತೆಹಚ್ಚಲು ಇವುಗಳ ಉಪಯೋಗ, ಭೂಭೌತ ವೈಜ್ಞಾನಿಕ ಸಂಶೋಧನೆಗೂ ಇವನ್ನು ಬಳಸುತ್ತಾರೆ.

4 ನ್ಯೂಕ್ಲಿಯರ್ ಸಂಶೋಧನ ಪ್ರಯೋಗಾಲಯ, ಶ್ರೀನಗರ: ನ್ಯೂಕ್ಲಿಯರ್ ಮತ್ತು ವಿಕರಣ ಭೌತವಿಜ್ಞಾನದಲ್ಲಿ ಸಂಶೋಧನೆ ನಡೆಸಲು ಇಲ್ಲಿ ಸೌಕರ್ಯಗಳಿವೆ.

5 ರಿಯಾಕ್ಟರ್ ಸಂಶೋಧನ ಕೇಂದ್ರ ಕಲ್ಫಾಕ್ಕಮ್: ತಮಿಳುನಾಡಿನಲ್ಲಿದೆ ಇದರ ಮುಖ್ಯ ಚಟುವಟಿಕೆಗಳು ರಿಯಾಕ್ಟರ್ ತಂತ್ರವಿದ್ಯೆ, ಬ್ರೀಡರ್ ರಿಯಾಕ್ಟರುಗಳು ಇಂಧನ ಪುನಃ ಪ್ರಕ್ರಮೀಕರಣ ಎಂಜಿನಿಯರಿಂಗ್, ವಸ್ತುವಿಜ್ಞಾನ ಮತ್ತು ಲೋಹವಿಜ್ಞಾನವಲಯಗಳಲ್ಲಿವೆ. ಫಾಸ್ಟ್-ಬ್ರೀಡರ್ ರಿಯಾಕ್ಟರುಗಳು, ವಸ್ತು ಅಭಿವರ್ಧನೆ ಪ್ರಯೋಗಾಲಯ, ವಿಕಿರಣ ಲೋಹವಿಜ್ಞಾನ ಪ್ರಯೋಗಾಲಯ ಮತ್ತು ವಿಕಿರಣ ರಸಾಯನವಿಜ್ಞಾನ ಪ್ರಯೋಗಾಲಯ-ಇವು ಇಲ್ಲಿ ಕೈಗೊಳ್ಳಲಾಗಿರುವ ಮುಖ್ಯ ಯೋಜನೆಗಳು.

6 ಉಚ್ಚ ಉನ್ನತಿ (ಹೈ ಆಲ್ಟಿಟ್ಯೂಡ್) ಸಂಶೋಧನೆ ಕೈಗೊಳ್ಳಲು ಗುಲ್ಮಾರ್ಗಿನಲ್ಲಿ ಃಂಖಅಯ ವತಿಯಿಂದ 1963ರಲ್ಲಿ ಹೈ ಆಲ್ಟಿಟ್ಯೂಡ್ ರಿಸರ್ಚ್ ಲ್ಯಾಬೊರೇಟರಿಯನ್ನು ಸ್ಥಾಪಿಸಲಾಯಿತು.

	ಇವಿಷ್ಟೇ ಅಲ್ಲದೇ ಪ್ರಧಾನವಾಗಿ ಪರಮಾಣುಶಕ್ತಿ ಇಲಾಖೆಯಿಂದಲೇ ಸಹಾಯಧನ ಪಡೆದಿರುವ ಅನೇಕ ಸಂಸ್ಥೆಗಳೂ ಇವೆ.

	ತಾತಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಖಿIಈಖ-ತಾತಾ ಮೂಲಭೂತ ವಿಜ್ಞಾನ ಮಂದಿರ) ಮುಂಬಾಯಿ: ನ್ಯೂಕ್ಲಿಯರ್ ವಿಜ್ಞಾನ ಮತ್ತು ಗಣಿತ ಕುರಿತಂತೆ ಇರುವ ರಾಷ್ಟ್ರೀಯ ಕೇಂದ್ರವಿದು.  1945ರಲ್ಲಿ ಸ್ಥಾಪನೆ ಕುಶಲಿಗಳ ತರಬೇತಿಯಲ್ಲಿ ಇದು ಮಹತ್ತ್ವದ ಪಾತ್ರ ವಹಿಸಿದೆ. ಪರಮಾಣುಶಕ್ತಿ ಇಲಾಖೆಯ ಕಾರ್ಯಕ್ರಮಗಳಿಗೆ ಇದರಿಂದ ವಿಶೇಷ ಸಹಾಯ ಒದಗಿದೆ ಇಲ್ಲಿಯ ಭೌತವಿಜ್ಞಾನವಿಭಾಗ ಸಂಶೋಧನ ಕೈಗೊಳ್ಳುವ ವಿಭಾಗಗಳಿವು: ವಿಶ್ವಕಿರಣಗಳು, ಪ್ರಾಯೋಗಿಕ ಮತ್ತು ಸೈದ್ಧಾಂತಿಕ ನ್ಯೂಕ್ಲಿಯರ್ ಭೌತವಿಜ್ಞಾನ ಕಣ, ಭೌತವಿಜ್ಞಾನ ಸೈದ್ಧಾಂತಿಕ ಭೌತವಿಜ್ಞಾನ, ಘಟಸ್ಥಿತಿ ಭೌತವಿಜ್ಞಾನ, ಖಭೌತವಿಜ್ಞಾನ, ಭೂಭೌತವಿಜ್ಞಾನ, ಆಣವಿಕ ಜೀವವಿಜ್ಞಾನ, ರೇಡಿಯೂ ಖಗೋಳವಿಜ್ಞಾನ ಮತ್ತು ಗಣಕವಿಜ್ಞಾನಗಳು. ಈ ಕೇಂದ್ರದ ಅಂಗವಾಗಿ ಕೊಡೈಕನಾಲಿನಲ್ಲಿ ಒಂದು ರೇಡಿಯೋಖಗೋಳ ವಿಜ್ಞಾನ ವೇಧಶಾಲೆ, ಕೋಲಾರ್ ಗೋಲ್ಡ್ ಫೀಲ್ಡ್ಸಿನಲ್ಲಿ ವಿಶ್ವಕಿರಣ ಪ್ರಯೋಗಾಲಯ, ಹೈದರಾಬಾದಿನಲ್ಲಿ ಬಲೂನ್ ಸಂಶೋಧನ ಸೌಕರ್ಯ ಮುಂತಾದವು ಇವೆ. ಈಚೆಗೆ ಜಪಾನೀ ಸಹಯೋಗದೊಡನೆ ಈ ಸಂಸ್ಥೆ ಕೋಲಾರ ಗೋಲ್ಡ್ ಫೋಲ್ಡ್ಸಿನಲ್ಲಿ ಪ್ರೋಟಾನ್ ಕ್ಷಯದ ಬಗ್ಗೆ ಗಹನ ಪ್ರಯೋಗಗಳನ್ನು ನಡೆಸುತ್ತಿದೆ.

	ಸಹಾ ಇನ್‍ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್, ಕಲ್ಕತ್ತ: 1950ರಲ್ಲಿ ಎಂ.ಎನ್. ಸಹಾ ಸ್ಥಾಪಿಸಿದ ಈ ಸಂಸ್ಥೆಗೆ ಮುಂದೆ ಅವರ ಹೆಸರನ್ನೇ ಕೂಡಲಾಗಿದೆ. ಇಲ್ಲಿಯ ಸಂಶೋಧನೆ ಸೌಯರ್ಕಗಳಲ್ಲಿ ಎಲೆಕ್ಟ್ರಾನ್ ಸೂಕ್ಷ್ಮದರ್ಶನ. ರಾಶಿರೋಹಿತದರ್ಶನ, ಎನ್‍ಎಂಆರ್ ರೋಹಿತದರ್ಶನ, ನ್ಯೂಕ್ಲಿಯರ್‍ರಸಾಯನ ವಿಜ್ಞಾನ, ವಿಕಿರಣ ರಸಾಯನವಿಜ್ಞಾನ, ಸ್ಫಟಿಕವಿಜ್ಞಾನ, ಘನಸ್ಥಿತಿಭೌತವಿಜ್ಞಾನ, ಪ್ಲಾಸ್ಮಾ ಭೌತವಿಜ್ಞಾನ ಮತ್ತು ಸೈದ್ಧಾಂತಿಕ ನ್ಯೂಕ್ಲಿಯರ್ ಭೌತವಿಜ್ಞಾನ ಸೇರಿವೆ. ಇಲ್ಲಿ ಎಚ್‍ಡಿ-ಗ್ಲಾಸ್ ಲೇಸರ್. ಧ್ರುವೀಕೃತಲಕ್ಷ್ಯ ಸೌಕರ್ಯ ಮುಂತಾದವನ್ನು ಅಭಿವರ್ಧಿಸಲು ಉದ್ದೇಶಿಸಿದೆ.

	ತಾತಾ ಮೆಮೋರಿಯಲ್ ಸೆಂಟರ್, ಮುಂಬಯಿ: ಇದರಲ್ಲಿ ತಾತಾ ಸ್ಮಾರಕ ಆಸ್ಪತ್ರೆ ಮತ್ತು ಕ್ಯಾನ್ಸರ್ ಸಂಶೋಧನ ಇನ್‍ಸ್ಟಿಟ್ಯೂಟ್ ಸೇರಿವೆ. ನ್ಯೂಕ್ಲಿಯರ್ ಮತ್ತು ಇತರ ವಿಧಾನಗಳನ್ನು ಪ್ರಯೋಗಿಸಿ ಕ್ಯಾನ್ಸರಿನ ಚಿಕಿತ್ಸೆ ಮತ್ತು ಅದರ ಕುರಿತು ಸಂಶೋಧನೆ ಇಲ್ಲಿಯ ಚಟುವಟಿಕೆಗಳಲ್ಲಿ ಸೇರಿವೆ.

	ಇನ್‍ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ಭುವನೇಶ್ವರ: 1975ರಲ್ಲಿ ಒರಿಸ್ಸಾ ಸರ್ಕಾರ ಸ್ಥಾಪಿಸಿದ ಈ ಸಂಸ್ಥೆಯನ್ನು ಪರಮಾಣುಶಕ್ತಿ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಇಲ್ಲಿ ನ್ಯೂಕ್ಲಿಯರ್, ಕಣ ಮತ್ತು ಘನಸ್ಥಿತಿ ಭೌತವಿಜ್ಞಾನಗಳಲ್ಲಿ ಸಂಶೋಧನೆ ನಡೆಸಲಾಗುತ್ತಿದೆ.

	ಪರಮಾಣುಶಕ್ತಿ ಇಲಾಖೆ ಅಂದಾಜು ರೂ.50 ಕೋಟಿ ವೆಚ್ಚದಲ್ಲಿ ಪ್ರವರ್ಧಿತ ತಂತ್ರವಿದ್ಯೆಯ ಒಂದು ಕೇಂದ್ರವನ್ನು (ಸೆಂಟರ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ ಅಂಖಿ) ಕೂಡ ಪ್ರವರ್ತಿಸಲು ಉದ್ದೇಶಿಸಿದೆ.  ಭವಿಷ್ಯ ಸಾಧ್ಯತೆಗಳನ್ನು ಹೊಂದಿರುವ ಲೇಸರುಗಳು, ವೇಗೋತ್ಕರ್ಷಕಗಳು ಮತ್ತು ಸಂಲಯನ ತಂತ್ರವಿದ್ಯೆ (ಪ್ಯೂಶನ್ ಟೆಕ್ನಾಲಜೀಸ್) ಇಂಥ ನವೋನ್ಮೇಷ ತಂತ್ರವಿದ್ಯೆಗಳತ್ತ ಇಲ್ಲಿಯ ಅವಧಾರಣೆ ಇದೆ. ದೇಶದ ಎಲ್ಲೆಡೆಗಳಿಂದ ವಿಜ್ಞಾನಿಗಳು ಹೊಸಭಾವನೆಗಳ ಹಾಗೂ ಅಭಿವರ್ಧನೆಗಳ ಕುರಿತು ಸಂಶೋಧನೆ ನಡೆಸಲು ಯೋಗ್ಯ ಕೇಂದ್ರವಾಗಿ ಇದು ಅಭಿವರ್ಧಿಸುವುದೆಂದು ನಿರೀಕ್ಷಿಸಲಾಗಿದೆ.

	(b) ವಾಣಿಜ್ಯಾತ್ಮಕ ಸಾಮಥ್ರ್ಯೋತ್ಪಾದನೆ: 1 ನ್ಯೂಕ್ಲಿಯರ್ ಸಾಮಥ್ರ್ಯೋತ್ಪಾದನೆಗೆ ಸಂಬಂಧಿಸಿದ ಸೌಕರ್ಯಗಳು: ಸಾಮಥ್ರ್ಯೋತ್ಪಾದನೆಗೆ ಬಳಸುವ ಎರಡು ಮುಖ್ಯ ರಿಯಾಕ್ಟರ್ ಮಾದರಿಗಳಿವು-(i) ಇಂಧನವಾಗಿ ಸಂವರ್ಧಿತ (ಎನ್‍ರಿಚ್ಡ್) ಯುರೇನಿಯಮ್ ಅವಶ್ಯವಾಗುವ ಕುದಿವನೀರಿನ ಮಾದರಿ ರಿಯಾಕ್ಟರುಗಳು, (ii) ಭಾರಜಲ ಅವಶ್ಯವಾಗುವ ಆದರೆ ನೈಸರ್ಗಿಕ ಯುಕೇನಿಯಮ್ಮನ್ನು ಇಂಧನವಾಗಿ ಉಪಯೋಗಿಸುವುದಿಲ್ಲ ಸಂವರ್ಧಿತ ಭಾರಜಲ (ಪ್ರೆಶ್ಯರೈಸ್ಡ್ ಹೆವಿವಾಟರ್, PಊW) ರಿಯಾಕ್ಟರುಗಳು.

	ಅತಿ ನಾಜೂಕಾದ ಸಂವರ್ಧನ ತಂತ್ರವಿದ್ಯೆಯಲ್ಲಿ ನಮ್ಮ ಪರಿಣತಿ ತೀರ ಮಿತವಾಗಿದೆ. ಎಂದೇ ಪರಮಾಣುಶಕ್ತಿ ಇಲಾಖೆ ಬಲು ದೊಡ್ಡ ಪ್ರಮಾಣದಲ್ಲಿ ಕೆನಡಾ ನೆರವಿನೊಂದಿಗೆ ಈ ಎರಡನೆಯ ಮಾದರಿ ಸಾಮಥ್ರ್ಯ ರಿಯಾಕ್ಟರುಗಳನ್ನು ಬೆಂಬಲಿಸಿದೆ. PಊW ಮಾದರಿ ರಿಯಾಕ್ಟರುಗಳಿಗೆ ಬೃಹತ್ಪ್ರಮಾಣದಲ್ಲಿ ಭಾರಜಲ ಅವಶ್ಯವಾಗುತ್ತದೆ. ಈ ಉದ್ದೇಶಕ್ಕಾಗಿ ಹಲವಾರು ಭಾರಜಲ ಸ್ಥಾವರಗಳನ್ನು ಸ್ಥಾಪಿಸಲಾಗಿದೆ.

	(i) ಭಾರಜಲಸ್ಥಾವರ, ಟ್ಯೂಟಿಕೋರಿನ್: ಇದರ ಆಲೇಖ್ಯದ ಗುರಿ ವಾರ್ಷಿಕವಾಗಿ 71.3 ಮೆಟ್ರಕ್ ಟನ್ ಭಾರಜಲದ ಉತ್ಪಾದನೆ. 1973ರಲ್ಲಿ ಇದು ಕಾರ್ಯ ಪ್ರವೃತ್ತವಾಯಿತು.

	(ii) ಭಾರಜಲಯೋಜನೆ, ಬರೋಡ: ಇದರ ಆಲೇಖ್ಯದ ಗುರಿ ವಾರ್ಷಿಕವಾಗಿ 67.2 ಮೆಟ್ರಕ್ ಟನ್ ಭಾರಜಲದ ಉತ್ಪಾದನೆ. 1977ರಲ್ಲಿ ಇದು ಕಾರ್ಯ ಪ್ರವೃತ್ತವಾಯಿತು.

	(iii) ಭಾರಜಲಸ್ಥಾವರ, ಕೋಟಾ: ಪೂರ್ತಿ ಕಾರ್ಯಪ್ರವೃತ್ತವಾದಾಗ ಇದು ವಾರ್ಷಿಕವಾಗಿ 100 ಮೆಟ್ರಿಕ್ ಟನ್ ಭಾರಜಲ ಉತ್ಪಾದಿಸಲಿದೆ.

	(iv) ಭಾರಜಲಸ್ಥಾವರ, ತಾಲ್ಚೀರ್: ಇದರ ಆಲೇಖ್ಯದ ಗುರಿ ವಾರ್ಷಿಕವಾಗಿ 62.7 ಮೆಟ್ರಕ್‍ಟನ್ ಭಾರಜಲದ ಉತ್ಪಾದನೆ. ಈ ಸ್ಥಾವರಕ್ಕೆ ತಾಲ್ಚೀರಿನಲ್ಲಿರುವ ಭಾರತದ ಅಮೊನಿಯಾ ಪ್ಲಾಂಟ್ ಫರ್ಟಿಲೈಸರಿನೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ.

	(v) ಭಾರಜಲಸ್ಥಾವರ, ನಂಗಲ್: 1962ರಲ್ಲಿ ಸ್ಥಾಪನೆ. ಇದರ ವಾರ್ಷಿಕ ಉತ್ಪಾದನ ಸಾಮಥ್ರ್ಯ 14 ಮೆಟ್ರಿಕ್‍ಟನ್.

	ಇವುಗಳ ಜೊತೆಗೆ ಪರಮಾಣುಶಕ್ತಿ ಇಲಾಖೆ ತಾಲ್‍ಎಂಬಲ್ಲಿ ವಾರ್ಷಿಕವಾಗಿ 110 ಮೆಟ್ರಿಕ್ ಟನ್ ಉತ್ಪಾದನೆ ಸಾಮಥ್ರ್ಯವಿರುವ ಮತ್ತು ಅಮೊನಿಯ-ಹೈಡ್ರೊಜನ್ ವಿನಿಮಯ ಪ್ರಕ್ರಿಯೆಯನ್ನು ಆಧರಿಸಿರುವ ಒಂದು ಭಾರಜಲ ಸ್ಥಾವರವನ್ನು ಪ್ರವರ್ತಿಸುತ್ತಿದೆ. ತಾಲ್ ಫರ್ಟಿಲೈಸರ್ ಪ್ಲಾಂಟ್ ಜೊತೆ ಇದಕ್ಕೆ ಸಂಪರ್ಕ ಕಲ್ಪಿಸಲಾಗುವುದು.  ವಾರ್ಷಿಕವಾಗಿ 185 ಮೆಟ್ರಿಕ್ ಟನ್ ಉತ್ಪಾದನ ಸಾಮಥ್ರ್ಯವಿರುವ ಇನ್ನೊಂದು ಸ್ಥಾವರವನ್ನು ಆಂಧ್ರಪ್ರದೇಶದ ಮನುಗುರು ಎಂಬಲ್ಲಿ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಹೈಡ್ರೊಜನ್‍ಸಲ್ಫೈಡ್-ನೀರು ವಿನಿಮಯ ಪ್ರಕ್ರಿಯೆ ಬಳಕೆ ಆಗುವುದು. ಇನ್ನೂ ಎರಡು ಸ್ಥಾವರಗಳು (ಪ್ರಾಯಶಃ ಹಝಿರಾದಲ್ಲಿ ಒಂದು) ಸ್ಥಾಪನೆಯ ಹಾದಿಯಲ್ಲಿವೆ.

	ಭಾರಜಲ ಸ್ಥಾವರಗಳಲ್ಲಿ ಅಡಕವಾಗಿರುವ ಕಠಿಣ ತಂತ್ರವಿದ್ಯೆಯ ಕಾರಣವಾಗಿ ಕೆಲವು ಸ್ಥಾವರಗಳು ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತವೆ. ಇವೆಲ್ಲವೂ ಪೂರ್ತಿ ಕಾರ್ಯಪ್ರವೃತ್ತವಾದಾಗ ವಾರ್ಷಿಕವಾಗಿ 15,000 ಮೆಟ್ರಿಕ್ ಟನ್ ಭಾರಜಲದ ಉತ್ಪಾದನೆಯನ್ನು ನಿರೀಕ್ಷಿಸಬಹುದು:

	ನ್ಯೂಕ್ಲಿಯರ್ ಸಾಮಥ್ರ್ಯ ಕಾರ್ಯಕ್ರಮದ ಇತರ ಕೇಂದ್ರಗಳಿವು:

	(vi) ನ್ಯೂಕ್ಲಿಯರ್ ಇಂಧನ ಸಂಕೀರ್ಣ, ಹೈದರಾಬಾದು: ನ್ಯೂಕ್ಲಿಯರ್ ಸಾಮಥ್ರ್ಯ ರಿಯಾಕ್ಟರುಗಳಿಗೆ ಬೇಕಾಗುವ ಇಂಧನ ಸಮುಚ್ಚಯ, ಶೀತಕಾರಿ ಮುಂತಾದವನ್ನು ರೂಪಿಸುವ ಸಲುವಾಗಿ ಈ ಸಂಕೀರ್ಣವನ್ನು ಸ್ಥಾಪಿಸಲಾಗಿದೆ. ಸಾಮಥ್ರ್ಯ ರಿಯಾಕ್ಟರುಗಳ ಇಂಧನಾವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಅಸಂವರ್ಧಿತ (ನಾನ್‍ಎನ್‍ರಿಚ್) ಇಂಧನೋತ್ಪದನೆಯನ್ನು ವಿಸ್ತರಿಸಲಾಗುತ್ತಿದೆ. ಕೈಗಾರಿಕೆಗಳಿಗೆ ಬೇಕಾಗುವ ಝಿರ್ಕೋನಿಯಮ್ ಮತ್ತು ಟೈಟಾನಿಯಮ್ಮಿನಂಥ ಪದಾರ್ಥಗಳನ್ನು ಕೂಡ ಈ ಸಂಕೀರ್ಣ ಉತ್ಪಾದಿಸುತ್ತಿದೆ.

	(vii) ಸಾಮಥ್ರ್ಯ ರಿಯಾಕ್ಟರ್ ಇಂಧನ ಪುನಃ ಪ್ರಕ್ರಮೀಕರಣ ಸ್ಥಾವರ, ತಾರಾಪುರ: ಕೋಟಾ ಮತ್ತು ತಾರಾಪುರದಲ್ಲಿಯ ನ್ಯೂಕ್ಲಿಯರ್ ಸಾಮಥ್ರ್ಯ ಸ್ಥಾವರಗಳಲ್ಲಿ ಉತ್ಪಾದನೆಯಾಗುವ ವಿಕಿರಣಿತ ನ್ಯೂಕ್ಲಿಯರ್ ಫ್ಯೂಯಲ್) ಈ ಸ್ಥಾವರದ ಉದ್ದೇಶ.

	(viii) ಪರಮಾಣು ಖನಿಜವಿಭಾಗ: ಪರಮಾಣುಶಕ್ತಿ ಕಾರ್ಯಕ್ರಮಕ್ಕೆ ಬೇಕಾಗುವ ಯುರೇನಿಯಮ್, ತೋರಿಯಮ್ ಮುಂತಾದ ಪರಮಾಣುಖನಿಜಗಳ ಮೋಜಣಿ, ಅಂದಾಜು ಮತ್ತು ಅನ್ವೇಷಕ ಅಭಿವರ್ಧನೆ ಈ ವಿಭಾಗದ ಹೊಣೆ.

	II ಪರಮಾಣು ಸಾಮಥ್ರ್ಯ ಠಾಣೆಗಳು. (i) ತಾರಾಪುರ ಪರಮಾಣುಶಕ್ತಿ ಠಾಣೆ; ಇದು ಮುಂಬಯಿಯಿಂದ ಸುಮಾರು 100 ಕಿಮೀ ದೂರದಲ್ಲಿದೆ. ಅಮೆರಿಕ ಜನರಲ್ ಎಲೆಕ್ಟ್ರಿಕ್ ಕಂಪನಿ ಇದನ್ನು ಕಟ್ಟಿದೆ. ಇದರಲ್ಲಿಯ ವಿದ್ಯುದುತ್ಪಾದನೆ ಸುಮಾರು 42 ಔmW. ಇದು ಕುದಿವ ನೀರಿನ ಮಾದರಿಯ ರಿಯಾಕ್ಟರ್. ಇಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಒದಗಿಸಿರುವ ಸಂವರ್ಧಿತ ಯುರೇನಿಯಮ್ ಇಂಧನವನ್ನು ಬಳಸಲಾಗುತ್ತಿದೆ ಸದ್ಯದಲ್ಲಿ (1984) ಸಂವರ್ಧಿತ ಇಂಧನದ ಪೂರೈಕೆ ಬಗ್ಗೆ ಅಮೆರಿಕ ಭಾರತ ದೇಶಗಳ ನಡುವೆ ಭಿನ್ನಾಭಿಪ್ರಾಯ ಹಣಿಕಿರುವುದರಿಂದ ಫ್ರಾನ್ಸಿನಿಂದ ಸಂವರ್ಧಿತ ಇಂಧನ ಪಡೆಯಲು ಪರ್ಯಾಯ ಏರ್ಪಾಡು ಮಾಡಲಾಗಿದೆ. ಈ ಠಾಣೆ ಮಹಾರಾಷ್ಟ್ರಾಕ್ಕೂ ಗುಜರಾತಿಗೂ ವಿದ್ಯುತ್ ಸರಬರಾಜು ಮಾಡುತ್ತಿದೆ.

	(ii) ರಾಜಸ್ಥಾನ ಪರಮಾಣು ಸಾಮಥ್ರ್ಯ ಠಾಣೆ, ಕೋಟಾ: ಇಲ್ಲಿ ಎರಡು ಘಟಕಗಳಿವೆ, 220 mತಿ ಉತ್ಪಾದನ ಸಾಮಥ್ರ್ಯದ ಮೊದಲನೆಯ ಘಟಕ 1973ರಿಂದ ಕಾರ್ಯಪ್ರವೃತ್ತವಾಗಿದೆ. ಇದನ್ನು ಕೆನಡಾದ ನೆರವಿನಿಂದ ಕಟ್ಟಲಾಗಿದೆ. ಭಾರಜಲ ಮಾದರಿಯದು. ಇದರಲ್ಲಿ ಬಳಕೆ ಆಗುತ್ತಿರುವುದು ನೈಸರ್ಗಿಕ ಯುರೇನಿಯಮ್. ಎರಡನೆಯ ಘಟಕ ಬೇಗನೆ ಕಾರ್ಯಪ್ರವೃತ್ತವಾಗುವ ನಿರೀಕ್ಷೆ ಇದೆ. ಹೆಚ್ಚಿನ ಸ್ಥಾವರಗಳ ಸ್ಥಾಪನೆಗೆ ಇದೇ ಮಾದರಿಯನ್ನು ಅನುಸರಿಸಬೇಕೆಂದು ಪರಮಾಣುಶಕ್ತಿ ಇಲಾಖೆ ಅಂಗೀಕರಿಸಿದೆ.

	(iii) ಮದ್ರಾಸ್ ಪರಮಾಣುಶಕ್ತಿ ಠಾಣೆ, ಕಲ್ಪಾಕ್ಕಮ್: ಇದು ಮದ್ರಾಸಿನಿಂದ ಸುಮಾರು 80 ಕಿಮೀ ದೂರದಲ್ಲಿದೆ. ಬಹುತೇಕ ಭಾರತೀಯ ಪರಿಣತಜ್ಞಾನದ ಫಲವಿದು. ಇಲ್ಲಿಯೂ ಎರಡು ಘಟಕಗಳಿವೆ. ಒಂದೊಂದರ ಉತ್ಪಾದನ ಸಾಮಥ್ರ್ಯ 200 mW ಬೃಹತ್ಪ್ರಮಾಣದಲ್ಲಿ ನ್ಯೂಕ್ಲಿಯರ್ ಸಾಮಥ್ರ್ಯವನ್ನು ಪಳಗಿಸಲು ಬೇಕಾಗುವ ನಿರ್ವಹಣ ಜ್ಞಾನ ನಮ್ಮಲ್ಲಿದೆ ಎಂಬುದನ್ನು ಈ ಸ್ಥಾವರದ ಸ್ಥಾಪನೆ ತೋರಿಸಿಕೊಟ್ಟಿದೆ.

	(iv) ನರೋರ ಪರಮಾಣು ಸಾಮಥ್ರ್ಯ ಠಾಣೆ ಉತ್ತರ ಪ್ರದೇಶ; ಹೆಚ್ಚು ಕಡಿಮೆ ಭಾರತೀಯ ನಿರ್ವಹಣ ಜ್ಞಾನದಿಂದಲೇ ನಿರ್ಮಿಸಲಾಗುತ್ತಿರುವ ಈ ದ್ವಿಘಟಕ ಸ್ಥಾವರ ಶೀಘ್ರವೇ ಪೂರ್ತಿಗೊಳ್ಳುವ ನಿರೀಕ್ಷೆ ಇದೆ.

	(iii) ನ್ಯೂಕ್ಲಿಯರ್ ಸಾಮಥ್ರ್ಯದ ಭವಿಷ್ಯ ಪ್ರತೀಕ್ಷೆ: ಸದ್ಯದಲ್ಲಿ ರಾಷ್ಟ್ರದ ಸಾಮಥ್ರ್ಯಾವಶ್ಯಕತೆಯ ಶೇಕಡಾ ಸುಮಾರು 2.5 ಭಾಗ ಮಾತ್ರ ನ್ಯೂಕ್ಲಿಯರ್ ಸಾಮಥ್ರ್ಯದಿಂದ ಪೂರೈಕೆ ಆಗುತ್ತಿದೆ. ದೇಶದಲ್ಲಿ ಕಲ್ಲಿದ್ದಲು ಮತ್ತು ತೈಲ ಮೀಸಲುಗಳು ತೀರ ಮಿತವಾಗಿರುವುದರಿಂದ ನಮ್ಮ ಸಾಮಥ್ರ್ಯ ಬೇಡಿಕೆಗಳನ್ನು ಪೂರೈಸಲು ನ್ಯೂಕ್ಲಿಯರ್ ಸಾಮಥ್ರ್ಯವನ್ನು ಸಾಧ್ಯವಾಗುವಷ್ಟೂ ಗರಿಷ್ಠ ಪ್ರಮಾಣದಲ್ಲಿ ಪಳಗಿಸಬೇಕೆಂಬುದು ನಿರ್ವಿವಾದ. ಇಸವಿ 2000ದ ವೇಳೆಗೆ ಸುಮಾರು ಹನ್ನೆರಡು 235mW ಮತ್ತು ಹತ್ತು 500mW ನ್ಯೂಕ್ಲಿಯರ್ ಸಾಮಥ್ರ್ಯದ ರಿಯಾಕ್ಟರುಗಳನ್ನೂ ಕಟ್ಟಬೇಕೆಂಬುದು ಪರಮಾಣುಶಕ್ತಿ ಇಲಾಖೆಯ ಯೋಜನೆ. ಇವುಗಳಲ್ಲಿಯೇ ಬೇಡಿಕೆಗಳನ್ನು ಪೂರೈಸುವಂತೆ ಭಾರಜಲ ಉತ್ಪಾದನೆಯನ್ನೂ ಹೊಂದಿಸಲಾಗವುದು. 1983ರ ಬೆಲೆ ಆಧರಿಸಿ ಹೇಳುವುದಾದರೆ ಇದರ ವೆಚ್ಚ ಸುಮಾರು ರೂ.14,000 ಕೋಟಿ ಆಗಬಹುದು.  ಸದ್ಯ ಗೊತ್ತಿರುವಷ್ಟು ಯುರೇನಿಯಮ್ ಮೂಲಗಳು ಈ ರಿಯಾಕ್ಟರುಗಳಿಗೆ ಇವುಗಳ ಜೀವಿತಾವಧಿ ಪೂರ್ತಿ ಇಂಧನ ಒದಗಿಸಬಲ್ಲವು. ಸದ್ಯೋಭವಿಷ್ಯದಲ್ಲಿ ಇನ್ನಷ್ಟು ಯುರೇನಿಯಮ್ ಮೀಸಲುಗಳನ್ನು ಪತ್ತೆ ಹಚ್ಚುವ ಸಾಧ್ಯತೆ ಇದೆ. ರಿಯಾಕ್ಟರುಗಳು ಉತ್ಪಾದಿಸುವ ಪ್ಲೂಟೋನಿಯಮ್ ಇಂಧನವನ್ನು ಫಾಸ್ಟ್-ರಿಯಾಕ್ಟರ್ ಕಾರ್ಯಕ್ರಮಗಳಲ್ಲಿ ಬಳಸಬಹುದು. ತಕ್ಕಷ್ಟು ಸುದೂರ ಭವಿಷ್ಯದಲ್ಲಿ ಫಾಸ್ಟ್-ಬ್ರೀಡರ್ ರಿಯಾಕ್ಟರುಗಳನ್ನು ಉಪಯೋಗಿಸಬೇಕಾಗುತ್ತದೆ. ಇವುಗಳ ನೆರವಿನಿಂದ ಯುರೇನಿಯಮ್, 238 ಮತ್ತು ತೋರಿಯಮ್ ಧಾತುಗಳಲ್ಲಿ ಅಡಗಿರುವ ಶಕ್ತಿಯನ್ನು ಬಸಿಯಬಹುದು. ಕೇರಳದ ಹಾಗೂ ತಮಿಳುನಾಡಿನ ಮರಳರಾಶಿಯಲ್ಲಿ ತೋರಿಯಮ್ ಮೂಲಗಳು ಸಮೃದ್ಧವಾಗಿವೆ. ಈ ಧಾತುವನ್ನು ರಿಯಾಕ್ಟರುಗಳ ನೆರವಿನಿಂದ ಯುರೇನಿಯಮ್ 233 ಆಗಿ ಪರಿವರ್ತಿಸಬಹುದು.

	ಯುರೇನಿಯಮ್-233 ಒಂದು ವಿದಳನಶೀಲ ಸಮಸ್ಥಾನಿ (ಫಿಸ್ಸೈಲ್ ಐಸೊಟೋಪ್). ಇದನ್ನು ಸಾಮಥ್ರ್ಯೋತ್ಪಾದನೆಗೆ ಬಳಸಬಹುದು ತೋರಿಯಮ್ ಮತ್ತು ಯುರೇನಿಯಮ್-238ರಂಥ ಮೂಲಗಳಿಂದ ವಿದಳನಶೀಲ ವಸ್ತುಗಳನ್ನು ನ್ಯೂಕ್ಲಿಯರ್ ರಿಯಾಕ್ಟರುಗಳಲ್ಲಿ ಉತ್ಪಾದಿಸುವ ಪ್ರಕ್ರಿಯೆಗೆ ಬ್ರೀಡಿಂಗ್ (ತಳೀಕರಣ) ಎಂದು ಹೆಸರು. 21ನೆಯ ಶತಮಾನದಲ್ಲಿ ಬ್ರೀಡರ್ ರಿಯಾಕ್ಟರುಗಳು ಅಗಾಧ ಸಾಮಥ್ರ್ಯದ ಆಕಾರಗಳಾಗಲಿವೆ ಎಂದು ನಿರೀಕ್ಷಿಸಬಹುದು. ಕಲ್ಪಾಕ್ಕಮ್ ರಿಯಾಕ್ಟರ್ ಸಂಶೋಧನ ಕೇಂದ್ರದಲ್ಲಿ ಬ್ರೀಡರ್ ತಂತ್ರವಿದ್ಯೆ ಕುರಿತ ಸಂಶೋಧನೆಯನ್ನು ಪ್ರವರ್ತಿಸಲಾಗಿದೆ. ಮುಂಬರುವ ಎರಡು ದಶಕಗಳಿಗಾಗಿ ಯೋಜಿಸಲಾಗಿರುವ 10,000 mW ಕಾರ್ಯಕ್ರಮ ದೇಶಕ್ಕೆ ಒಳ್ಳೆಯ ನ್ಯೂಕ್ಲಿಯರ್ ತಳಪಾಯ ಒದಗಿಸಲಿದೆ. ಮುಂದಿನ ಶತಮಾನದ ಒಂದು ದಿನ ಬ್ರೀಡರ್ ತಂತ್ರವಿದ್ಯೆಯ ಮೂಲಕ ತೋರಿಯಮ್ಮನ್ನು ಬಳಸದೆಯೇ ಇನ್ನೂ 3,50,000 mW ನ್ಯೂಕ್ಲಿಯರ್ ಸಾಮಥ್ರ್ಯ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.

	ಸಾಮಥ್ರ್ಯೋತ್ಪಾದನೆಯ ಜೊತೆಗೆ ವಿಕರಣಪಟು ತ್ಯಾಜ್ಯಗಳ ಸಂಗ್ರಹವೂ ಸೇರಿಕೊಳ್ಳಲಿದೆ. ತ್ಯಾಜ್ಯವಸ್ತುಗಳನ್ನು ಕಾಂಕ್ರೀಟ್ ಜೊತೆ ಬೆರೆಸಿ ಭದ್ರವಾಗಿ ಹೂಳಲಾಗುವುದು ತ್ಯಾಜ್ಯಗಳ ಉತ್ಪಾದನೆ ತೀರ ದೊಡ್ಡ ಮೊತ್ತವೈದಿದಾಗ ಅವುಗಳ ನಿವಾರಣೆಗೆ ಇನ್ನೂ ಬಲು ನಾಜೂಕು ತಂತ್ರಗಳು ಬೇಕಾಗುವುದು ಸಹಜ. ಅದನ್ನು ಗಾಜಾಗಿ ಪರಿವರ್ತಿಸಿ ಆಳವಾದ ಗಣಿ ಬಿರುಕುಗಳಂಥ ಭೂವೈಜ್ಞಾನಿಕ ಕಂದರಗಳಲ್ಲಿ ಹುಗಿಯುವುದು ಸಾಧ್ಯವಾದೀತು.

	(ಛಿ) ಪರಮಾಣು ಶಕ್ತಿಗೆ ಸಂಬಂಧಿಸಿದ ಇತರ ಉದ್ಯಮಗಳು (i) ದಿ ಇಂಡಿಯನ್ ರೇರ್ ಅತ್ರ್ಸ್ ಲಿಮಿಟೆಡ್ (ಭಾರತೀಯ ವಿರಳ ಮೃತ್ತಿಕೆಗಳು ನಿಯಮಿತ): ಕೇರಳದ ಹಾಗೂ ತಮಿಳುನಾಡಿನ ಕರಾವಳಿ ಮರಳಿನಿಂದ ಪಡೆದ ಮೋನಝೈಟನ್ನು ಪ್ರಕ್ರಮಗೊಳಿಸಿ ಯುರೇನಿಯಮ್ ಮತ್ತು ತೋರಿಯಮ್ ಸಂಯುಕ್ತಗಳನ್ನು ಶೋಧಿಸಿ ತೆಗೆವ ಸಲುವಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು (1950). ಇದರ ನೋಂದಾಯಿತ ಕಚೇರಿ ಮುಂಬಯಿಯಲ್ಲಿದೆ. ಒಂದು ಸ್ಥಾವರ ಕೇರಳದ ಆಳ್ವಾಯಿಯಲ್ಲಿದೆ. ಚವಾರಾ (ಕೇರಳ) ಮತ್ತು ಮನವಾಲಕುರಿಚಿ (ತಮಿಳುನಾಡು) ಎಂಬಲ್ಲಿ ಖನಿಜ ಮರಳು ಪ್ರತ್ಯೇಕೀಕರಣ ಸ್ಥಾವರಗಳಿವೆ. ಟ್ರೋಂಬೆಯಲ್ಲಿ ತೋರಿಯಮ್ ಕಾರ್ಖಾನೆ ಇದೆ.

(ii) ದಿ ಯುರೇನಿಯಮ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಜಾಡುಗುಡ : ಮುಖ್ಯವಾಗಿ ನ್ಯೂಕ್ಲಿಯರ್ ಸಾಮಥ್ರ್ಯ ಸ್ಥಾವರಗಳಿಗೆ ಯುರೇನಿಯಮ್ಮನ್ನು ಪೂರೈಸುವ ಸಲುವಾಗಿ 1967ರಲ್ಲಿ ಇದನ್ನು ಸ್ಥಾಪಿಸಲಾಯಿತು.

(iii) ದಿ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್: 1967ರಲ್ಲಿ ಸ್ಥಾಪಿಸಲಾಯಿತು. ಹೈದರಾಬಾದಿನಲ್ಲಿ ಇದರ ನೋಂದಾಯಿತ ಕಚೇರಿ ಇದೆ. ಭಾರತೀಯ ನಿರ್ವಹಣಜ್ಞಾನ ಆಧರಿಸಿ ನವುರಾದ ಎಲೆಕ್ಟ್ರಾನಿಕ್ ಘಟಕಗಳು, ಸಲಕರಣೆಗೂ ಮತ್ತು ವ್ಯವಸ್ಥೆಗಳನ್ನು ಅಭಿವರ್ಧಿಸಿ ತಯಾರಿಸಿ ಮಾರಾಟ ಮಾಡುವುದು ಇದರ ಉದ್ದೇಶ. ದೂರದರ್ಶನ ಹಾಗೂ ಗಣಕ ಮುಂತಾದ ವಲಯಗಳಿಗೂ ಇದರ ಕಾರ್ಯಕ್ಷೇತ್ರ ವ್ಯಾಪಿಸಿದೆ ಃಂಖಅ ಮತ್ತು ಖಿIಈಖ ಅಭಿವರ್ಧಿಸಿದ ಸಲಕರಣೆಗಳನ್ನು ಕೂಡ ಇದು ಮಾರಾಟಮಾಡುತ್ತದೆ.

(ಜ) ನ್ಯೂಕ್ಲಿಯರ್ ಆಸ್ಫೋಟನೆ : 1974 ಮೇ 18ರಂದು ಪರಮಾಣುಶಕ್ತಿ ಇಲಾಖೆ ರಾಜಸ್ಥಾನದ ಪೋಖರನ್ ಎನ್ನುವಲ್ಲಿ ಭೂಮ್ಯಂತರ್ಗತ ನ್ಯೂಕ್ಲಿಯರ್ ಆಸ್ಫೋಟನೆ ಸಾಧಿಸಿತು. ಪ್ಲೂಟೋನಿಯಮ್ಮನ್ನು ಬಳಸಿದ ವಿದಳನ ಸಾಧನವಿದು. ಇದರ ಸ್ಫೋಟನ ಸಾಮಥ್ರ್ಯ ಸುಮಾರು 12 ಕಿಲೊಟನ್ ಟಿಎನ್‍ಟಿ.  ಈ ಕೂಟಕ್ಕೆ ಪ್ರವೇಶ ಪಡೆಯಿತು. ಈ ಪರಿಣತ ಜ್ಞಾನವನ್ನು ಬಳಸಿ ಭಾರತ ತನ್ನ ತೋಫ್‍ಖಾನೆಯನ್ನು ನ್ಯೂಕ್ಲಿಯರ್ ಬಾಂಬುಗಳಿಂದ ಭರ್ತಿಮಾಡಬಹುದಾಗಿತ್ತು. ಆದರೆ ಸರ್ಕಾರ ಈ ದಿಶೆಯಲ್ಲಿ ಪ್ರಶಂಸನೀಯ ಸಂಯಮದಿಂದ ವರ್ತಿಸಿ ಆ ಕಾರ್ಯಕ್ಕೆ (ಬಾಂಬ್ ನಿರ್ಮಾಣ) ಕೈ ಹಾಕಿಲ್ಲ.

(e) ಪರಮಾಣು ಶಕ್ತಿ ಇಲಾಖೆಯ ಇತರ ಕೆಲವು ಚಟುವಟಿಕೆಗಳು : ವಿಕಿರಣ ಸಮಸ್ಥಾನಿ ವಿಭಾಗ (ರೇಡಿಯೊ ಐಸೊಟೋಪ್ ಡಿವಿಶನ್) ವಿಕಿರಣ ಸಮಸ್ಥಾನಿಗಳನ್ನು ಉತ್ಪಾದಿಸಿ ದೇಶ ವಿದೇಶಗಳಲ್ಲಿ ವಿಕ್ರಯಿಸುತ್ತದೆ.  ವೈದ್ಯ ಮತ್ತು ಕೃಷಿ ಸಂಶೋಧನೆಗಳಲ್ಲಿ ವಿಕಿರಣ ಸಮಸ್ಥಾನಿಗಳನ್ನು ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ.  ಟ್ರೋಂಬೆಯಲ್ಲಿರುವ ವಿಕಿರಣ ನಿರ್ಜೀವಿಕರಣ (ಸ್ಟರಿಲೈಸೇಶನ್) ಸ್ಥಾವರ ವೈದ್ಯಕೀಯ ಉತ್ಪನ್ನಗಳನ್ನು ನಿರ್ಜೀವಕರಿಸುತ್ತದೆ.  ಇಲ್ಲಿ ಶೇಂಗಾ ಮುಂತಾದ ಬೆಳೆಗಳ ತಳಿಗಳನ್ನು ಸುಧಾರಿಸಲು ಸಾಕಷ್ಟು ಸಂಶೋಧನೆ ಕೂಡ ನಡೆದಿದೆ.

(ಜಿ) ನ್ಯೂಕ್ಲಿಯರ್ ಸಂಲಯನ (ಫ್ಯೂಶನ್): ಸಂಲಯನದಲ್ಲಿಯ ಶಕ್ತಿವಿಭವ ಅಗಾಧವಾಗಿದೆ. ಈ ಸಂಶೋಧನೆಯಲ್ಲಿ ಅದ್ಭುತ ಮುನ್ನಡೆ ಸಾಧ್ಯವಾಗಿದ್ದರೂ ಸಂಲಯನ ಕ್ರಿಯೆಗಳಿಂದ ನಿಯಂತ್ರಿತ ಸಾಮಥ್ರ್ಯದ ಉತ್ಪಾದನೆ ಇನ್ನೂ ಕೈಗೂಡಿಲ್ಲ, ವರ್ತಮಾನ ಕಾಲದಲ್ಲಿ ತೀವ್ರ ಸಂಶೋಧನೆ ನಡೆಯುತ್ತಿರುವ ವಲಯವಿದು. ಪರಮಾಣು ಶಕ್ತಿ ಇಲಾಖೆ ಇದರಲ್ಲಿ ಕಾರ್ಯನಿರತವಾಗಿದೆ. ಸಂಲಯನ, ಪ್ಲಾಸ್ಮಾ ಭೌತವಿಜ್ಞಾನ ಮುಂತಾದವುಗಳಲ್ಲಿ ಪ್ರವರ್ಧಿತ ಸಂಶೋಧನೆಗಾಗಿ ಅಹಮದಾಬಾದಿನಲ್ಲಿ ಹೊಸತೊಂದು ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಗಿದೆ.
		(ಸಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ